ಇತ್ತೀಚಿನ ಸುದ್ದಿ
ಗ್ರಾಮೀಣ ನೀರು ನೈರ್ಮಲ್ಯ ಸಪ್ತಾಹ ಆಚರಣೆ, ವಸ್ತು ಪ್ರದರ್ಶನ ಉದ್ಘಾಟನೆ
August 3, 2020, 2:26 PM

ಮಂಗಳೂರು(reporterkarnataka news):ರಾಜ್ಯ ಸರಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತು ಇಲಾಖೆ ಕಳೆದ ಒಂದು ವರ್ಷದ ಅವಧಿಯಲ್ಲಿ ಕಾರ್ಯಗತಗೊಳಿಸಿರುವ ಪ್ರಗತಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಇಲಾಖೆಯು ಒದಗಿಸುತ್ತಿರುವ ವಿವಿಧ ಸೌಲಭ್ಯಗಳನ್ನು ಸದುಪಯೊಗ ಪಡಿಸಿಕೊಳ್ಳುವ ಹಾಗೂ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ “ಗ್ರಾಮೀಣ ನೀರು ನೈರ್ಮಲ್ಯ ಸಪ್ತಾಹ” ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸೋಮವಾರ ಉದ್ಘಾಟಿಸಿದರು.

ಪರಿಸರ ಸಂರಕ್ಷಣೆ ಕುರಿತು ಜಿಪಂ ಸಹಾಯಕ ಕಾರ್ಯದರ್ಶಿ ಪ್ರತಿಜ್ಞೆ ವಿಧಿ ಬೋಧಿಸಿದರು.
ಜಿಪಂ ಸದಸ್ಯರು, ಜಿಪಂ ಸಿಇಒ ಆರ್. ಸೆಲ್ವಮಣಿ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಆಚರಿಸುತ್ತಿದೆ.