ಇತ್ತೀಚಿನ ಸುದ್ದಿ
ಗೃಹ ಸಚಿವ ಬೊಮ್ಮಾಯಿ ನಾಳೆ ಮಂಗಳೂರಿಗೆ ಭೇಟಿ, ಪ್ರವಾಹ, ಭೂ ಕುಸಿತ ಪರಿಶೀಲನೆ
August 11, 2020, 4:18 PM

ಮಂಗಳೂರು(reporterkarnataka news): ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ನಗರದ ಟೆಲಿಕಾಂ ಹೌಸ್ ರಸ್ತೆಯಲ್ಲಿರುವ ಪಾಂಡೇಶ್ವರ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಅವರು, ಪ್ರವಾಹ, ಭೂಕುಸಿತ ಇತರೆ ಪ್ರಕೃತಿ ವಿಕೋಪ ಕರೆಗಳ ಸಂದರ್ಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ, ಗೃಹ ರಕ್ಷಕ ದಳ, ರಾಜ್ಯ ವಿಪತ್ತು ಸ್ಪಂದನಾ ಪಡೆಗಳ ಹಾಗೂ ರಕ್ಷಣಾ ಉಪಕರಣಗಳ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಪರಿಶೀಲಿಸಿ ಅಧಿಕಾರಿಗಳ ಜೊತೆ ಸಭೆ ನಡೆಸಲಿರುವರು.