ಇತ್ತೀಚಿನ ಸುದ್ದಿ
ಗಿಡವಾಗಿ ಬೆಳೆದು ಹೂವಾಗಿ ಅರಳುವ ರಕ್ಷೆ !
July 23, 2020, 4:09 AM

ಕೈಗೆ ಕಟ್ಟುವ ರಕ್ಷಾಬಂಧನ ಇನ್ನು ಗಿಡವಾಗಿ ಬೆಳೆದು ಹೂವಾಗಿ ಅರಳಲಿದೆ. ಬಿತ್ತಿದರೆ ಗಿಡವಾಗುವ ರಕ್ಷಾಬಂಧನವನ್ನು ಪರಿಸರಪ್ರೇಮಿಯೊಬ್ಬರು ಸಿದ್ಧಪಡಿಸಿದ್ದಾರೆ.
ಮಂಗಳೂರು ತಾಲೂಕಿನ ಪಕ್ಷಿಕೆರೆಯ ಯುವಕ ನಿತಿನ್ ವಾಸ್ ಇಂಥ ವಿಶೇಷ ರಕ್ಷಾಬಂಧನವನ್ನು ಸಿದ್ಧಪಡಿಸಿದ್ದಾಾರೆ.
ಈಗಾಗಲೇ ವೋಕಲ್ ಲೋಕಲ್ ಅಭಿಯಾನಕ್ಕೆ ಈವರೆಗೆ ನಾವು ಬಳಸುವ ರಕ್ಷೆಗಳಲ್ಲಿ ಪರಿಸರಕ್ಕೆ ಮಾರಕವಾಗುವ ಮಣಿಗಳು, ಬೇಗಡೆಗಳು, ಎರಕದ ಚಿತ್ತಾರಗಳು, ವಿಷಕಾರಿ ಅಂಶಗಳಿಲ್ಲ ಪೇಂಟ್ಗಳಿರುತ್ತಿದ್ದವು. ಇದಕ್ಕೆ ಪರ್ಯಾಯವಾಗಿ ಇಂಥ ಪರಿಸರಸ್ನೇಹಿ ರಕ್ಷೆಗಳನ್ನು ತಯಾರಿಸಿರುವುದಾಗಿ ನಿತಿನ್ ವಾಸ್ ಹೇಳುತ್ತಾರೆ.

ಪೂರಕವೆಂಬಂತೆ ತೆಂಗಿನ ಚಿಪ್ಪಿನ ಅಡುಗೆ ಮನೆ ಬಳಕೆ ವಸ್ತುಗಳು, ಗೆರಸು, ಹಿಡಿಸೂಡಿ, ಚಾಪೆ ಮುಂತಾದ ವಸ್ತುಗಳನ್ನು ಸಾಂಪ್ರದಾಯಿಕ ತಯಾರಿಸುವವರ ಮೂಲಕ ಅವುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಮೂಲಕ ನಿತಿನ್ ವಾಸ್ ಗಮನಸೆಳೆದಿದ್ದಾರೆ.