ಇತ್ತೀಚಿನ ಸುದ್ದಿ
ಗಾಜಿಯಾಬಾದ್ ನಲ್ಲಿ ಪತ್ರಕರ್ತನ ಹತ್ಯೆ: ಪತ್ರಕರ್ತರ ಪ್ರತಿಭಟನೆ
July 22, 2020, 6:06 AM

ಗಾಜಿಯಾಬಾದ್(reporterkarnatakanews): ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಪತ್ರಕರ್ತ ವಿಕ್ರಂ ಜೋಷಿ ಅವರ ಬರ್ಬರ ಹತ್ಯೆ ಖಂಡಿಸಿ ನೂರಾರು ಪತ್ರಕರ್ತರು ಪ್ರತಿಭಟನೆ ನಡೆಸಿದರು. ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಜೋಷಿ ಪ್ರಾಣ ಕಳೆದುಕೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ವಿಕ್ರಂ ಜೋಷಿ ಇಂದು ಮುಂಜಾನೆ ಅಸುನೀಗಿದರು.
ತಂಗಿಯ ಮಗಳನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಜೋಷಿ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.