ಇತ್ತೀಚಿನ ಸುದ್ದಿ
ಖೆಡ್ಡಕ್ಕೆ ಬಿದ್ದ ಪುಟ್ಟ ಕರುವನ್ನು ಮೇಲಕ್ಕೆತ್ತಿದ ನಿಖಿಲ್ ಪೂಜಾರಿ
July 17, 2020, 3:56 AM

ಮಂಗಳೂರು (reporterkarnataka news):
ಸುಮಾರು 10 ಅಡಿ ಆಳದ ನೀರು ತುಂಬಿದ ಹೊಂಡದಿಂದ ಪುಟ್ಟ ದನದ ಕರುವನ್ನು ಮೇಲಕ್ಕೆತ್ತಿ ಯುವಕರೊಬ್ಬರು ಮಾನವೀಯತೆ ಹಾಗೂ ಸಾಹಸ ಮೆರೆದಿದ್ದಾರೆ.
ಇದೆಲ್ಲ ನಡೆದದ್ದು ತಣ್ಣೀರುಬಾವಿಗೆ ಹೋಗುವ ಕುದುರೆಮುಖ ರಸ್ತೆಯಲ್ಲಿ. ಗುತ್ತಿಗೆ ಕಾರ್ಮಿಕರ ಬೇಜವಾಬ್ದಾರಿಯಿಂದ ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಇದೆಲ್ಲ ನಡೆದಿದೆ.

ಗುತ್ತಿಗೆ ಕಾರ್ಮಿಕರು ರಸ್ತೆ ಬದಿಯಲ್ಲಿ ಸುಮಾರು 10 ಅಡಿ ಆಳದ ಗುಂಡಿ ತೋಡಿ ಮುಚ್ಚದೆ ಹಾಗೆ ಬಿಟ್ಟು ಹೋಗಿದ್ದರು. ಏನು ಅರಿಯದ ಪುಟ್ಟ ಕರು ಹುಲ್ಲು ಮೇಯುತ್ತಾ ಬಂದು ಈ ಖೆಡ್ಡಾಕ್ಕೆ ಬಿದ್ದಿದೆ. ಈ ಸಮಯದಲ್ಲಿ ಮಂಗಳೂರು ಕಡೆಯಿಂದ ಬರುತ್ತಿದ್ದ ನಿಖಿಲ್ ಪೂಜಾರಿ ಅವರಿಗೆ ಕರು ಗುಂಡಿಗೆ ಬಿದ್ದಿರುವ ವಿಷಯ ತಿಳಿಯಿತು. ತಕ್ಷಣ ಕಾರ್ಯಪ್ರವೃತ್ತರಾದ ಅವರು ಹಿಂದೆ ಮುಂದೆ ನೋಡದೆ ತೊಟ್ಟ ಬಟ್ಟೆಯಲ್ಲೇ ಗುಂಡಿಗೆ ಇಳಿದೇ ಬಿಟ್ಟರು. ಕರುವನ್ನ ಮೇಲಕ್ಕೆ ಎತ್ತಿ ಆದರ ಆರೈಕೆ ಮಾಡಿ ಅದರ ವಾರಸುದಾರರಿಗೆ ಒಪ್ಪಿಸಿದ್ದಾರೆ. ನಿಖಿಲ್ ಪೂಜಾರಿ ಸಾಹಸ ಎಲ್ಲೆಡೆ ಪ್ರಶಂಸೆಗೆ ಗುರಿಯಾಗಿದೆ.