4:49 AM Wednesday27 - January 2021
ಬ್ರೇಕಿಂಗ್ ನ್ಯೂಸ್
ಬಂಧನ ಭೀತಿಯಿಂದ ಸಿಎಂ ಯಡಿಯೂರಪ್ಪ, ನಿರಾಣಿ ಬಚಾವ್: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು… ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾದ ಡಾ. ಬಿ.ಎಂ. ಹೆಗ್ಡೆ ಅವರಿಗೆ ಸಂಸದ ನಳಿನ್, ಶಾಸಕ ಕಾಮತ್… ಖ್ಯಾತ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು: ಪುನಃ ಕಾಣಿಸಿಕೊಂಡ ಎದೆನೋವು ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೀಡಾದ ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆ  ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ

ಇತ್ತೀಚಿನ ಸುದ್ದಿ

ಖಾಸಗಿ ಆಸ್ಪತ್ರೆಗಳಲ್ಲಿ ಪಿಪಿಇ ಕಿಟ್ ಹೆಸರಿನಲ್ಲಿ ದಂಧೆ: 5 ಪಟ್ಟು ಅಧಿಕ ಹಣ ವಸೂಲಿ !

August 2, 2020, 5:15 AM

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka@gmail.com

ಕೊರೊನಾದಿಂದ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿ ಜನರು ಸಂಕಷ್ಟಕ್ಕೆ ಸಿಲುಕಿದರೆ, ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಆರೋಗ್ಯ ದಂಧೆಯನ್ನು ಎಗ್ಗಿಲ್ಲದೆ ನಡೆಸುತ್ತಿವೆ. 300ರಿಂದ 400 ರೂ. ಬೆಲೆಯ ಪಿಪಿಇ ಕಿಟ್ ಗಳನ್ನು 1500 ರೂ.ಗೆ ಮಾರಾಟ ಮಾಡುತ್ತಿವೆ.

ದೇಶಕ್ಕೆ ದಾಳಿ ಮಾಡಿರುವ ಕೊರೊನಾ ವೈರಸ್ ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡಿದೆ. ಹಲವರು ಕೆಲಸ ಕಳೆದುಕೊಂಡಿದ್ದಾರೆ. ನೌಕರಿ ಇದ್ದವರಿಗೆ ಅರ್ಧ ಸಂಬಳ ಸಿಗುತ್ತಿದೆ. ವ್ಯಾಪಾರ -ವ್ಯವಹಾರ ಕುಸಿದಿದೆ. ಆದರೆ ಕೆಲವು ಅಧಿಕಾರಸ್ಥರಿಗೆ, ಕೆಲವು ಖಾಸಗಿ ಆಸ್ಪತ್ರೆಗಳಿಗೆ, ಅ್ಯಂಬುಲೆನ್ಸ್ ಮಾಲೀಕರಿಗೆ, ಮಧ್ಯವರ್ತಿಗಳಿಗೆ ಹಣ ಮಾಡಲು ದಾರಿ ಮಾಡಿ ಕೊಟ್ಟಿದೆ. ಇದಕ್ಕೆ ತಾಜಾ ನಿದರ್ಶನ ಪಿಪಿಇ ಕಿಟ್ ದಂಧೆ. ಮೊನ್ನೆ ವರೆಗೂ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು 3.50 ಲಕ್ಷ ರೂ. ವಸೂಲಿ ಮಾಡುತ್ತಿದ್ದ ಆಸ್ಪತ್ರೆಗಳು ಇದೀಗ ಕಿಟ್ ದಂಧೆಯಲ್ಲಿ ತೊಡಗಿವೆ.

ಪಿಪಿಇ ಕಿಟ್ ಗಳು ಆನ್ ಲೈನ್ ಅಮೆಜಾನ್ ನಲ್ಲಿ 279 ರೂಪಾಯಿಗೆ ಬಿಕಾರಿಯಾಗುತ್ತಿದೆ. ಸರ್ಜಿಕಲ್ ಕಂಪನಿಗಳು ಇದನ್ನು ನೇರವಾಗಿ 300ರಿಂದ 400 ರೂಪಾಯಿಗೆ ನೀಡುತ್ತಿವೆ. ಆದರೆ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳು 1500 ರೂಪಾಯಿಗೆ ಮಾರಾಟ ಮಾಡುತ್ತಿವೆ. ಇದು ಆರೋಗ್ಯ ದಂಧೆಯಲ್ಲದೆ ಇನ್ನೇನು ಎಂದು ಜನಸಾಮಾನ್ಯರು ಕಣ್ಣೀರು ಇಡುತ್ತಾ ಜಿಲ್ಲಾಡಳಿತವನ್ನು ಪ್ರಶ್ನಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ಪಿಪಿಇ ಕಿಟ್ ನಲ್ಲಿ 5 ಪಟ್ಟು ಅಧಿಕ ಹಣ ವಸೂಲಿ ಮಾಡುತ್ತಿವೆ. 

ಕೊರೊನಾದಿಂದ ರೋಗಿ ಮೃತಪಟ್ಟರೆ ಆ್ಯಂಬುಲೆನ್ಸ್ ಚಾಲಕನಿಗೆ, ಹೆಣ ಎತ್ತುವವರಿಗೆ, ವೀಡಿಯೊ ಮಾಡುವವರಿಗೆ ಸೇರಿದಂತೆ ಕನಿಷ್ಠ 6 ಪಿಪಿಇ ಕಿಟ್ ಖರೀದಿಸುವುದು ಕಡ್ಡಾಯವಾಗಿದೆ. ಇದಕ್ಕೆ 9 ಸಾವಿರ ರೂ. ತಗಲುತ್ತದೆ. ಹೆಜಮಾಡಿಯ ಪ್ರಮೋದ್ ಸಾಲ್ಯಾನ್ ಪ್ರಕರಣದಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆಯ ಮೇಲೆ ಇಂತಹದ್ದೊಂದು ಆರೋಪ ಕೇಳಿ ಬಂದಿದೆ. ಮೃತದೇಹವನ್ನು 48 ತಾಸು ಇರಿಸಿಕೊಂಡು 20 ಸಾವಿರ ಬಿಲ್ ಹಾಕಿದ ಆರೋಪವಿದೆ.

ಒಟ್ಟಿನಲ್ಲಿ ಪಿಪಿಇ ಕಿಟ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲಾಡಳಿತವಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲೆಯ 8 ಮಂದಿ ಶಾಸಕರಾಗಲಿ, ಸಂಸದರಾಗಲಿ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಜನಪ್ರತಿನಿಧಿಗಳು ಜನರ ಪರ ಮಾತನಾಡುವ ಅಗತ್ಯವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು