ಇತ್ತೀಚಿನ ಸುದ್ದಿ
ಕೊರೋನಾ ಗೆದ್ದು ಬಂದ ಅಂಕೋಲಾ ಕಾನ್ ಸ್ಟೇಬಲ್ ಗೆ ಹೂಮಳೆಯ ಸ್ವಾಗತ
July 15, 2020, 6:45 AM
ಅಂಕೋಲಾ: ಕೊರೋನಾ ಸೋಂಕಿನಿಂದ ಗುಣಮುಖವಾಗಿ ಮರಳಿದ ಪೊಲೀಸ್ ಕಾನ್ ಸ್ಟೇಬಲ್ ಗೆ ಇಲ್ಲಿನ ಠಾಣೆಯ ಅಧಿಕಾರಿ, ಸಿಬ್ಬಂದಿ ಹೂ ಮಳೆ ಸ್ವಾಗತ ಕೋರಿದರು.
ಅಂಕೋಲಾ ಪೊಲೀಸ್ ಠಾಣೆಯ ಈ ಕಾನ್ ಸ್ಟೇಬಲ್, ಸೀಲ್ ಡೌನ್ ಪ್ರದೇಶವಾಗಿದ್ದ ಅಗ್ರಗೋಣದ ಬೀಟ್ ಕರ್ತವ್ಯದಲ್ಲಿದ್ದ. ಇಲ್ಲಿ ಬಂದೋಬಸ್ತ್ ಹಾಗೂ ಗಂಟಲು ದ್ರವ ಸಂಗ್ರಹಣಾ ಕರ್ತವ್ಯದಲ್ಲೂ ಪಾಲ್ಗೊಂಡಿದ್ದ ಕಾರಣ ಕೊರೋನಾ ಸೋಂಕಿಗೆ ಗುರಿಯಾಗಿದ್ದರು.

ಇವರನ್ನು ಜು.3ರಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸುಮಾರು 10 ದಿನಗಳ ಚಿಕಿತ್ಸೆಯ ಬಳಿಕ ಇವರ ಗಂಟಲು ದ್ರವದ ವರದಿ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಸಿಬ್ಬಂದಿಯನ್ನು ಠಾಣೆಯಲ್ಲಿ ಸಹೋದ್ಯೋಗಿಗಳು ಸಂಭ್ರಮದಿಂದ ಬರ
