ಇತ್ತೀಚಿನ ಸುದ್ದಿ
ಕೊರೊನಾ ನೋಟಿಸ್ ಗೆ ಕಾನೂನಿನ ಮೂಲಕ ಉತ್ತರ: ಮಾಜಿ ಸಿಎಂ ಸಿದ್ದರಾಮಯ್ಯ
August 1, 2020, 7:21 AM

ಬೆಂಗಳೂರು(reporterkarnataka news): ಕೊರೊನಾ ನಿಯಂತ್ರಿಸಲು ನಡೆದ ಉಪಕರಣ ಖರೀದಿ ಹಗರಣ ಬಯಲಿಗೆಳೆದ್ದಕ್ಕಾಗಿ ಬಿಜೆಪಿಯ ಪರಿಷತ್ ಸದಸ್ಯರು ನೋಟಿಸ್ ಕಳುಹಿಸಿದ್ದಾರೆ. ಇದನ್ನು ಕಾನೂನಿನ ಮೂಲಕವೇ ಎದುರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ನೋಟಿಸ್ ಪ್ರಕ್ರಿಯೆಗೆ ಕಾನೂನಿನ ಮೂಲಕವೇ ಉತ್ತರಿಸಲಾಗುವುದು. ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವುದು ಪ್ರತಿಪಕ್ಷದ ಕರ್ತವ್ಯ. ಆ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಕೊರೋನಾ ಉಪಕರಣಗಳ ಖರೀದಿ ವಿಷಯದಲ್ಲಿ ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ. ಈ ಸಂಬಂಧ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅವರಿಗೆ ನೋಟಿಸ್ ಕಳುಹಿಸಿತ್ತು.