ಇತ್ತೀಚಿನ ಸುದ್ದಿ
ಕೊರೊನಾ ತಡೆಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ಆನ್ ಲೈನ್ ತರಬೇತಿ
July 20, 2020, 10:50 AM

ಮಂಗಳೂರು :ಜುಲೈ20(reporterkarnataka news): ಕೋವಿಡ್ – 19 ಸಂಬಂಧಿಸಿದಂತೆ ವಾvರ್ಡ್ ಹಾಗೂ ಬೂತ್ ಮಟ್ಟದ ಆನ್ ಲೈನ್ ತರಬೇತಿ ಮಂಗಳೂರು ಮಹಾನಗರಪಾಲಿಕೆ ವತಿಯಿಂದ 6 ಸ್ಥಳಗಳಲ್ಲಿ ಸೋಮವಾರ ನಡೆಯಿತ
ಪಾಲಿಕೆ ಸಭಾಂಗಣ, ಸಮಿತಿ ಸಭಾಂಗಣ, ಕಂಪ್ಯೂಟರ್ ವಿಭಾಗ, ಕದ್ರಿ ಉಪ ಕಚೇರಿ, ಸುರತ್ಕಲ್ ಉಪ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ತರಬೇತಿ ನಡೆಸಲಾಯಿತು.
ಮೇಯರ್ ದಿವಾಕರ ಪಾಂಡೇಶ್ವರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕುಮಾರ್, ಜಗದೀಶ್, ಪಾಲಿಕೆ ಪ್ರಭಾರ ಆಯುಕ್ತ ದಿನೇಶ್ ಕುಮಾರ್, ಉಪ ಆಯುಕ್ತ (ಕಂದಾಯ) ಬಿನಾಯ್ ನಂಬಿಯಾರ್, ಪರಿಸರ ಎಂಜಿನಿಯರ್ ಮಧು ಮನೋಹರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.