ಇತ್ತೀಚಿನ ಸುದ್ದಿ
ಕೊರೊನಾಕ್ಕೆ ಕಾಸರಗೋಡಿನಲ್ಲಿ ಮತ್ತೊಂದು ಬಲಿ
July 22, 2020, 3:38 AM

ಕಾಸರಗೋಡು(reporterkarnatakanews):
ಮಾರಕ ಕೊರೊನಾ ಕಾಸರಗೋಡಿನಲ್ಲಿ ಮತ್ತೊಂದು ಬಲಿಪಡೆದುಕೊಂಡಿದೆ.
ಚಿಕಿತ್ಸೆ ಫಲಕಾರಿಯಾಗದೆ 47 ವರ್ಷ ಪ್ರಾಯದ ಮಹಿಳೆಯೊಬ್ಬರು ಅಸುನೀಗಿದ್ದಾರೆ. ಅವರು ಕಣ್ಣೂರಿನ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸೋಮವಾರ ಮೃತಪಟ್ಟ ಮಹಿಳೆಯಲ್ಲಿ ಕೊರೋನಾ ಸೋಂಕಿನ ಲಕ್ಷಣ ದೃಢೀಕರಿಸಲಾಗಿತ್ತು. ಇವರಿಗೆ ಯಾವ ಮೂಲದಿಂದ ರೋಗ ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗಿಲ್ಲ. ಮಂಗಳವಾರ ಕಾಸರಗೋಡಿನಲ್ಲಿ 40 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು.
ಈ ಮಧ್ಯೆ ಕಾಸರಗೋಡಿಗೆ ಕರ್ನಾಟಕದಿಂದ ಒಳದಾರಿಯಲ್ಲಿ ಬಂದರೆ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.