ಇತ್ತೀಚಿನ ಸುದ್ದಿ
ಕೊರೊನಾಕ್ಕಿಂತ ಬಿಜೆಪಿ ಭ್ರಷ್ಟಾಚಾರ ಭೀಕರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
July 31, 2020, 11:21 AM

ಮಂಗಳೂರು(reporterkarnataka news):
ರಾಜ್ಯ ಬಿಜೆಪಿ ಸರಕಾರ ಹೆಣಗಳ ಮೇಲೆ ರಾಜಕೀಯ ಮಾಡುತ್ತಿದೆ. ಇದು ಸರಕಾರಕ್ಕೆ ಬಲುದೊಡ್ಡ ಶಾಪ. ಕೊರೊನಾಕ್ಕಿಂತ ಬಿಜೆಪಿ ಭ್ರಷ್ಟಾಚಾರ ಭೀಕರವಾದದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ರಾಜ್ಯ ಸರಕಾರ ಕೊರೊನಾದಿಂದ ಸಾವನ್ನಪ್ಪಿದವರ ಹೆಣಗಳಿಂದ ದುಡ್ಡು ಮಾಡಲು ಹೊರಟಿದೆ. ಕೊರೊನಾಕ್ಕಿಂತ ಬಿಜೆಪಿಯ ಭ್ರಷ್ಟಾಚಾರ ಭೀಕರವಾದುದು ಎಂದು ಹೇಳಿದರು.
ಬಿಜೆಪಿ ಸರಕಾರ ನನ್ನ ಮೇಲೆ ಇಡಿ, ಸಿಬಿಐ ಇಲಾಖೆಯ ಮೂಲಕ ದಾಳಿ ಮಾಡಿಸಿದೆ. ನನ್ನನ್ನು ಗಲ್ಲಿಗೆ ಹಾಕಲು ಹೊರಟಿದೆ. ಸರಕಾರದಿಂದ ಲೀಗಲ್ ನೊಟೀಸ್ ಬಂದಿದೆ. ನೋಟಿಸ್ಗೆ ಉತ್ತರ ನೀಡುತ್ತೇವೆ ಎಂದು ಡಿಕೆಶಿ ನುಡಿದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ನಿಂತಿದೆ. ಬೇಕಾಬಿಟ್ಟಿ ಬಿಲ್ಗಳನ್ನು ನೀಡುತ್ತಾರೆ. ನಾಲ್ಕು ಲಕ್ಷ ಮೌಲ್ಯದ ವೆಂಟಿಲೇಟರ್, ಕಿಟ್ನ್ನು 18 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ನಾನು 1050 ರೂಪಾಯಿಗೆ ಥರ್ಮಲ್ ಸ್ಕ್ಯಾನ್ನ್ನು ಖರೀದಿ ಮಾಡಿದ್ದೇನೆ. 100 ರೂಪಾಯಿಗೆ ಸ್ಯಾನಿಟೈಸರ್ನ್ನು ಖರೀದಿ ಮಾಡಿದ್ದೇನೆ. ಆದರೆ ಸರಕಾರ ಸಾವಿರಾರು ರೂಪಾಯಿ ಖರ್ಚು ಮಾಡಿ ಖರೀದಿಸಿದೆ ಎಂದು ಟೀಕಿಸಿದರು.