ಇತ್ತೀಚಿನ ಸುದ್ದಿ
ಕೇರಳದಲ್ಲಿ ಮತ್ತೊಂದು ಮಹಾ ದುರಂತ: ಭಾರಿ ಭೂಕುಸಿತ, ಮಣ್ಣಿನಡಿಯಲ್ಲಿ 50 ಮಂದಿ ಸಿಲುಕಿರುವ ಶಂಕೆ
August 7, 2020, 7:10 AM

ತಿರುವನಂತಪುರಂ(reporterkarnatakanews): ಕೇರಳದಲ್ಲಿ ಮಹಾ ಮಳೆ ಮುಂದುವರಿದಿದ್ದು, ಇಡುಕ್ಕಿ ಜಿಲ್ಲೆಯಲ್ಲಿ ಮುನ್ನಾರ್ ಬಳಿ ಭಾರೀ ಭೂಕುಸಿತ ಸಂಭವಿಸಿದೆ.
ರಾಜಾ ಮಲೆ ಎಂಬಲ್ಲಿ ಭಾರೀ ಭೂ ಕುಸಿತ ವರದಿಯಾಗಿದೆ.. ಕನಿಷ್ಟ ಐದು ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಭೂ ಕುಸಿತ ಸಂಭವಿಸಿದಾಗ 83 ಮಂದಿ ಕೆಲಸದಲ್ಲಿ ನಿರತರಾಗಿದ್ದರು. ಇದಕ್ಕಿದ ಹಾಗೆ ಮಣ್ಣು ಅವರ ಮೇಲೆ ಜಾರಿ ಬಿತ್ತು ಎಂದು ಮೂಲಗಳು ತಿಳಿಸಿವೆ.ಇದೀಗ 10 ಮಂದಿಯನ್ನು ರಕ್ಷಿಸಲಾಗಿದೆ. ಕಳೆದ ಮೂರು ದಿನಗಳಿಂದ ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮೊಬೈಲ್ ನೆಟ್ ವರ್ಕ್ ದೊರೆಯುತ್ತಿರಲಿಲ್ಲ.
ಇಡುಕ್ಕಿ ಜಿಲ್ಲಾಡಳಿತಕ್ಕೆ ವಿಳಂಬವಾಗಿ ಈ ದುರಂತದ ಮಾಹಿತಿ ದೊರೆತಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.