8:21 PM Tuesday1 - December 2020
ಬ್ರೇಕಿಂಗ್ ನ್ಯೂಸ್
ಕುಂಚ ಕಲಾವಿದರು ವೃತ್ತಿ ಕೌಶಲ್ಯ ಹೆಚ್ಚಿಸಿ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು ರಾಜ್ಯದ 6004 ಗ್ರಾಮ ಪಂಚಾಯಿತಿ ಪೈಕಿ 5762 ಗ್ರಾಪಂಗಳಲ್ಲಿ ನಡೆಯಲಿದೆ ಲೋಕಲ್ ಫೈಟ್  ರಾಜಕೀಯ ಪಕ್ಷ ಸ್ಥಾಪನೆ: ಇಂದು ಸೂಪರ್ ಸ್ಟಾರ್ ರಜನಿಕಾಂತ್ ಸಭೆ ದಿಲ್ಲಿಯಲ್ಲಿ ರೈತರ ಪ್ರತಿಭಟನೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಇತ್ತೀಚಿನ ಸುದ್ದಿ

ಕುವೈತ್‌ನಲ್ಲಿ ಕಿನ್ನಿಗೋಳಿ ಯುವಕ ಸಮುದ್ರ ಪಾಲು

July 19, 2020, 2:21 PM

ಮಂಗಳೂರು(reporterkarnataka news)

ಕಟೀಲು ಸಮೀಪದ ಕಿನ್ನಿಗೋಳಿ ನಿವಾಸಿ ಕುವೈತ್ ನ ಸಾಲ್ಮಿಯಾ ಬೀಚ್ ನಲ್ಲಿ ಸಮುದ್ರಪಾಲಾದ ಘಟನೆ ಶನಿವಾರ ಸಂಜೆ ನಡೆದಿದೆ.

ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ ಈ ದುರ್ಘಟನೆ  ನಡೆದಿದ್ದು ಕಿನ್ನಿಗೋಳಿ ಮೂಲದ ಮೊಹಮ್ಮದ್ ಅನೀಸ್ (28) ಸಮುದ್ರ ಪಾಲಾದ ಯುವಕ.

ಅನೀಸ್ ತನ್ನ  ಸ್ನೇಹಿತರೊಂದಿಗೆ ಸಾಲ್ಮಿಯಾ ಬೀಚ್ ಗೆ ಸಮುದ್ರ ವಿಹಾರಕ್ಕೆ ತೆರಳಿದ್ದರು. ಈ ಸಂದರ್ಭ ಸಮುದ್ರ ಪಾಲಾಗುತ್ತಿದ್ದ ಈಜಿಪ್ಟ್ ಪ್ರಜೆಯನ್ನು ರಕ್ಷಿಸಲು ಮುಂದಾಗಿದ್ದ ಈ ದುರ್ಘಟನೆ ಸಂಭವಿಸಿದೆ.

ಅಪರಿಚಿತ ಯುವಕನನ್ನು ರಕ್ಷಿಸಲು ಹೋಗಿ ಅನೀಸ್ ಅವರೇ ಸಮುದ್ರ ಪಾಲಾದರು. ಕುವೈತ್ ನೇವಿ, ಕೋಸ್ಟ್ ಗಾರ್ಡ್ ನ ಕಾರ್ಯಾಚರಣೆಯಿಂದ ಭಾನುವಾರ ಬೆಳಗ್ಗೆ ಅವರ ಮೃತದೇಹ ಮೇಲೆತ್ತಲಾಗಿದೆ.

ಕುವೈತ್ ನಲ್ಲಿಯೇ ಅವರ ಮೃತದೇಹದ ದಫನ ಕಾರ್ಯ ನೆರವೇರಿಸಲು ಕುಟುಂಬಿಕರು ನಿರ್ಧರಿಸಿದ್ದಾರೆಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು