10:05 AM Wednesday25 - November 2020
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ನ ತಂತ್ರಗಾರಿಕೆ ನಾಯಕ ಅಹಮ್ಮದ್ ಪಟೇಲ್ ಮಾರಕ ಕೊರೊನಾಕ್ಕೆ ಬಲಿ ನಿವಾರ್ ಚಂಡಮಾರುತ: ರಾಜ್ಯದ ಹಲವೆಡೆ ಇನ್ನೆರಡು ದಿನ ಭಾರೀ ಮಳೆ ನಿರೀಕ್ಷೆ, ಯಲ್ಲೋ… ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: ಬೆಂಗಳೂರಿನಲ್ಲಿ ಬೃಹತ್  ಪ್ರಮಾಣದ ಮಾದಕ ದ್ರವ್ಯ ವಶ ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ ಮಾಜಿ ಸಭಾಪತಿ ರಮೇಶ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಕಾಂಗ್ರೆಸ್ ನಿಂದ ಅನ್ನಸಂತರ್ಪಣೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಯ್ ನಿಧನ ಶಾಲೆ ಆರಂಭ ಪ್ರಸ್ತಾಪ: ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ 

ಇತ್ತೀಚಿನ ಸುದ್ದಿ

ಕಾಸರಗೋಡು ಮದುವೆಯಲ್ಲಿ ಭಾಗವಹಿಸಿದ 43 ಮಂದಿಗೆ ಕೊರೋನಾ ಸೋಂಕು

July 25, 2020, 4:44 PM

ಕಾಸರಗೋಡು(reporterkarnatakanews):

ಮದುವೆ ಸಮಾರಂಭದಲ್ಲಿ ಪಾಲ್ಗೊಂಡ 43 ಮಂದಿಗೆ ಕೊರೋನಾ ಸೋಂಕು ತಗುಲಿದ ಘಟನೆ ಕಾಸರಗೋಡಿನಲ್ಲಿ  ನಡೆದಿದೆ. 

ಜಿಲ್ಲೆಯ ಚೆಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.  ಸೋಂಕಿತರ ಪಟ್ಟಿಯಲ್ಲಿ ವಧು ಮತ್ತು ವರ ಕೂಡ ಸೇರಿದ್ದಾರೆ. ಕಾಸರಗೋಡಿನ ಚೆಂಗಳ  ಸಮೀಪದ ಪಿಲಾಂಕಟ್ಟೆಯಲ್ಲಿ  ಈ ಪ್ರಕರಣ ವರದಿಯಾಗಿದೆ.

ಮದುವೆ ಸಮಾರಂಭದಲ್ಲಿ  60 ಮಂದಿ ಪಾಲ್ಗೊಂಡಿದ್ದರು. ಇವರಲ್ಲಿ ಇದೀಗ 43 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಶನಿವಾರ  ಕಾಸರಗೋಡಿನಲ್ಲಿ  105 ಕೊರೋನಾ ಪ್ರಕರಣ ವರದಿಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು