ಇತ್ತೀಚಿನ ಸುದ್ದಿ
ಕಾಸರಗೋಡಿನಲ್ಲಿ 101 ಮಂದಿಗೆ ಕೊರೋನಾ ಸೋಂಕು
July 22, 2020, 2:06 PM

ತಿರುವನಂತಪುರಂ(reporterkarnatakanews): ಕಾಸರಗೋಡಿನಲ್ಲಿ 101 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಇದು ಜಿಲ್ಲೆಯಲ್ಲಿ ಒಂದು ದಿನ ವರದಿಯಾದ ಅತ್ಯಧಿಕ ಕೊರೋನಾ ಪ್ರಕರಣವಾಗಿದೆ.ಇದರಲ್ಲಿ 85 ಮಂದಿಗೆ ಸಂಪರ್ಕದಿಂದ ರೋಗ ತಗುಲಿದೆ. ಕುಂಬಳೆ ಪಂಚಾಯತ್ ವ್ಯಾಪ್ತಿಯಲ್ಲಿ 40 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ . ಕಳೆದ 24 ಗಂಟೆ ಅವಧಿಯಲ್ಲಿ ಕೇರಳದಲ್ಲಿ 1038 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಕೇರಳದಲ್ಲಿ 8818 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 33 ಮಂದಿ ವೆಂಟಿಲೇಟರ್ ನ ಮೇಲೆ ಅವಲಂಬಿತರಾಗಿದ್ದಾರೆ. ಕೊರೋನಾ 63 ನರ್ಸ್ ಗಳು ಮತ್ತು 47 ವೈದ್ಯರ ಮೇಲೂ ದಾಳಿ ನಡೆಸಿದೆ.
ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಿಗೆ ಭೇಟಿ ನೀಡುವುದಕ್ಕೆ ಕೆಲವು ನಿರ್ಬಂಧ ವಿಧಿಸಲಾಗಿದೆ. ಪೂರ್ವಾನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ.