ಇತ್ತೀಚಿನ ಸುದ್ದಿ
ಕಾಸರಗೋಡಿನಲ್ಲಿ ಕೊರೋನಾಕ್ಕೆ ಮತ್ತೊಂದು ಬಲಿ
July 25, 2020, 3:14 AM

ತಿರುವನಂತಪುರಂ(reporterkarnatakanews): ಕಾಸರಗೋಡಿನಲ್ಲಿ ಮಾರಕ ಕೊರೋನಾ ಮತ್ತೆ ಒಂದು ಬಲಿಪಡೆದುಕೊಂಡಿದೆ. ಕಣ್ಣೂರಿನ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಇದೀಗ ಸಾವನ್ನಪ್ಪಿದ್ದಾರೆ. ಇವರು ಪಡನ್ನಕಾಡ್ ನಿವಾಸಿಯಾಗಿದ್ದಾರೆ.
ಮೃತ ಮಹಿಳೆ ನ್ಯೂಮೇನಿಯಾ ಸೇರಿದಂತೆ ಹಲವು ರೋಗಗಳಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಕಾಸರಗೋಡಿನಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿದೆ. ಶುಕ್ರವಾರ ಕಾಸರಗೋಡಿನಲ್ಲಿ 106 ಮಂದಿಗೆ ಕೊರೋನಾ ಸೋಂಕು ವರದಿಯಾಗಿತ್ತು . ಕಾಸರಗೋಡಿನಲ್ಲಿ ಆರು ಕೊರೋನಾ ಕ್ಲಸ್ಟರ್ ನಿರ್ಮಾಣಗೊಂಡಿದೆ. ಕೇರಳದಲ್ಲಿ ಶುಕ್ರವಾರ 885 ಕೊರೋನಾ ಪ್ರಕರಣ ದೃಢೀಕರಿಸಲಾಗಿತ್ತು.. ಇವರಲ್ಲಿ 724 ಮಂದಿಗೆ ಸಂಪರ್ಕದಿಂದ ರೋಗ ತಗುಲಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಇದೇ ವೇಳೆ ಕೇರಳದಲ್ಲಿ ಸದ್ಯಕ್ಕೆ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ