ಇತ್ತೀಚಿನ ಸುದ್ದಿ
ಕಾವೇರಮ್ಮನ ಮಡಿಲು ಬಿಟ್ಟು ಬರಲಾರೆ ಎಂದಿದ್ದರು ಅರ್ಚಕ ನಾರಾಯಣಾಚಾರ್ !!
August 6, 2020, 2:37 PM

ಮಡಿಕೇರಿ(reporterkarnataka news):
ಕಾವೇರಮ್ಮನ ಮಡಿಲು ಬಿಟ್ಟು ಬರಲಾರೆ ಎಂದು ಇದೀಗ ಭೂಕುಸಿತದಿಂದ ಸಮಾಧಿಯಾದ ಮನೆಯೊಳಗೆ ಸಿಲುಕಿಕೊಂಡಿರುವ ತಲ
ಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣಾಚಾರ್ ಹೇಳಿರುವ ಅಂಶ ಬೆಳಕಿಗೆ ಬಂದಿದೆ.
ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಭೂ ಕುಸಿತ ಉಂಟಾದ ಸಂದರ್ಭದಲ್ಲಿಯೂ ಕಾಮೇರಮ್ಮ ಮಡಿಲು ಬಿಟ್ಟು ಬರಲು ನಾರಾಯಣಾಚಾರ್ ನಿರಾಕರಿಸಿದ್ದರು ಎನ್ನಲಾಗಿದೆ. ತನ್ನ ಬಂಧು-ಮಿತ್ರರಲ್ಲಿ ಮಾತನಾಡುತ್ತಿದ್ದಾಗ ಯಾವುದೇ ಕಾರಣಕ್ಕೂ ತಲ ಕಾವೇರಿ ಬಿಟ್ಟು ಬರುವುದಿಲ್ಲ ಎಂದಿದ್ದರು.
ಇದೀಗ ಬೆಟ್ಟ ಕುಸಿತದಿಂದ ಎರಡು ಮನೆಗಳು ಮಣ್ಣಿನಡಿಯಲ್ಲಿ ಸಮಾಧಿಯಾಗಿವೆ. ಇದರಲ್ಲಿ ನಾರಾಯಣಾಚಾರ್ ಕುಟುಂಬ ಸಿಲುಕಿಕೊಂಡಿರುವ ಶಂಕೆಯಿದೆ.
ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಅವರ ಕಾರಿನ ಬಾಗಿಲು ಹಾಗೂ ತಲಕಾವೇರಿ ಯಿಂದ ಕೊಚ್ಚಿಕೊಂಡು ಬಂದಿರುವ ಸಾಮಗ್ರಿಗಳು ಹಾಗೂ
ನಾರಾಯಣಾಚಾರ್ ಅವರ ಮನೆಗೆ ಸೇರಿದ ಜಾನುವಾರು ಭಾಗಮಂಡಲದ ಬಳಿ ಪತ್ತೆ.
ಈಗಾಗಲೇ ಜೆಸಿಬಿ ಮೂಲಕ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು, ಮಳೆ ಹಾಗೂ ಗಾಳಿಯ ರಭಸ ಇಡೀ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಭಗಂಡೇಶ್ವರ ಕ್ಕೇತ್ರಕ್ಕೂ ನೀರು ನುಗ್ಗಿದೆ. ಬೆಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.