ಇತ್ತೀಚಿನ ಸುದ್ದಿ
ಕಾಂಗ್ರೆಸ್ ನ ತಂತ್ರಗಾರಿಕೆ ನಾಯಕ ಅಹಮ್ಮದ್ ಪಟೇಲ್ ಮಾರಕ ಕೊರೊನಾಕ್ಕೆ ಬಲಿ
November 25, 2020, 8:01 AM

ನವದೆಹಲಿ(reporterkarnataka news): ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಕೊರೊನಾದಿಂದ ಮೃತಪಟ್ಟಿದ್ದಾರೆ. ಅವರಿಗೆ 71 ವರ್ಷ ಪ್ರಾಯವಾಗಿತ್ತು.
ರಾಜಕೀಯ ತಂತ್ರಗಾರಿಕೆಗೆ ಅಹ್ಮದ್ ಪಟೇಲ್ ಹೆಸರುವಾಸಿಯಾಗಿದ್ದರು. ರಾಜೀವ್ ಗಾಂಧಿ ಜತೆ ರಾಜಕೀಯ ಪ್ರವೇಶಿಸಿದ್ದ ಅಹ್ಮದ್ ಪಟೇಲ್, ಸೋನಿಯಾ ಗಾಂಧಿ ಅವರ ಪರಮಾಪ್ತರಾಗಿದ್ದರು.
ಸೋನಿಯಾ ಗಾಂಧಿ ಅವರ ರಾಜಕೀಯ ತೀರ್ಮಾನದಲ್ಲಿ ಅಹ್ಮದ್ ಪಟೇಲ್ ಅವರ ನಿಲುವು ಅಂತಿಮವಾಗಿರುತ್ತಿತ್ತು.
ಮೂರು ಬಾರಿ ಲೋಕಸಭಾ ಸದಸ್ಯರಾಗಿ ಮತ್ತು ಐದು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.