ಇತ್ತೀಚಿನ ಸುದ್ದಿ
ಕಾಂಗ್ರೆಸ್ ನಾಯಕ ಐವನ್ ಗೆ ಕೊರೊನಾ ಪಾಸಿಟಿವ್ : ಕೈ ನಾಯಕರಿಗೆ ಟೆನ್ಶನ್
August 1, 2020, 2:11 PM

ಮಂಗಳೂರು(reporterkarnataka news):
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಆಗಿರುವುದು ದೃಢಪಟ್ಟಿದೆ. ಐವನ್ ಅವರ ಸ್ವಾಬ್ ಟೆಸ್ಟ್ ವೇಳೆ ಕೊರೋನಾ ಸೋಂಕು

ಪತ್ನಿಗೂ ಕೊರೋನಾ ಪಾಸಿಟಿವ್ ಕಂಡು ಬಂದಿದೆ.ಐವನ್ ಡಿಸೋಜ ಅವರು ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಿಕೆಶಿ ಪತ್ರಿಕಾಗೋಷ್ಠಿಯಲ್ಲಿಯೂ ಐವನ್ ಪಾಲ್ಗೊಂಡಿದ್ದರು.
ಇದೀಗ ಐವನ್ ಜತೆಗಿದ್ದ ಕಾಂಗ್ರೆಸ್ ನಾಯಕರಿಗೆ ಕ್ವಾರೆಂಟೈನ್ ಟೆನ್ಷನ್ ಕಾಡತೊಡಗಿದೆ. ಮಾಜಿ ಸಚಿವ ಯು.ಟಿ.ಖಾದರ್, ಬಿ. ರಮಾನಾಥ ರೈ, ಸೇರಿದಂತೆ ಹಲವು ಮುಖಂಡರಿಗೆ ಆತಂಕ ಉಂಟಾಗಿದೆ.