ಇತ್ತೀಚಿನ ಸುದ್ದಿ
ಕಡ್ಡಾಯ ವರ್ಗಾವಣೆಯಲ್ಲಿ ನೊಂದ ಶಿಕ್ಷಕರಿಗೆ ಸಿಗಲಿದೆಯ ರಿಲೀಫ್ ? : ಆಗಸ್ಟ್ನಲ್ಲಿ ಶಿಕ್ಷಕರ ವರ್ಗಾವಣೆ ಎಂದ ಸಚಿವರು
July 31, 2020, 1:48 PM

ಬೆಂಗಳೂರು ( reporter Karnataka News)
ಶಿಕ್ಷಕರ ವರ್ಗಾವಣೆಯ ಸಂಬಂಧ ನಿಯಮಗಳನ್ನು ಶಿಕ್ಷಣ ಇಲಾಖೆ ಅಂತಿಮಗೊಳಿಸಿ. ಈ ಕಾಯ್ದೆಗೆ ಈಗಾಗಲೇ ಅಧಿವೇಶನದಲ್ಲೂ ಅನುಮೋದನೆ ದೊರೆತಿದೆ. ಹೀಗಾಗಿ ಕೂಡಲೇ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂಬುದಾಗಿ ಇಂದು ನಡೆದಂತ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಶಿಕ್ಷಕರ ವರ್ಗಾವಣೆ ಸಂಬಂಧ ಇತ್ತೀಚೆಗೆ ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಕೂಡ ಹೊರಡಿಸಿತ್ತು. ಈ ಬಳಿಕ ಶಿಕ್ಷಕರ ವರ್ಗಾವಣೆಗೆ ಜಾಲನೆ ನೀಡಿರುವ ರಾಜ್ಯ ಸರ್ಕಾರ ಆಗಸ್ಟ್ ನಲ್ಲಿ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ ಸಿದ್ಧಗೊಳಿಸಿ, ಪ್ರಕಟಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಈ ಕುರಿತು ಮಾಹಿತಿ ನೀಡಿದ ಅವರು ಶಿಕ್ಷಕ, ಶಿಕ್ಷಣ ಸ್ನೇಹಿಯಾದ ವರ್ಗಾವಣಾ ನೀತಿಯ ಮೂಲಕ ಆಗಸ್ಟ್ ನಲ್ಲಿ ಶಿಕ್ಷಕರ ವರ್ಗಾವಣೆ ನಡೆಯಲಿದೆ ಎಂಬುದಾಗಿ ತಿಳಿಸಿದ್ದಾರೆ.
ಕಳೆದ ಬಾರಿ ಕಡ್ಡಾಯ ವರ್ಗಾವಣೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಂತ ಶಿಕ್ಷಕರು ಈ ಬಾರಿ ಮೊದಲ ಆದ್ಯತೆಯಲ್ಲಿ ವರ್ಗಾವಣೆಗೊಳ್ಳಲಿದ್ದಾರೆ. ಆಗಸ್ಟ್ ನಲ್ಲಿ ಈ ಸಂಬಂಧ ವರ್ಗಾವಣಾ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎಂದು ತಿಳಿದು ಬಂದಿದೆ