ಇತ್ತೀಚಿನ ಸುದ್ದಿ
ಎಬಿಡಿ ಬಿರುಗಾಳಿಗೆ ರಾಜಸ್ಥಾನ ತತ್ತರ..!! ರಾಯಲ್ ಬೌಲರ್ಗಳ ಬೆಂಡೆತ್ತಿದ ಮಿ.360
October 17, 2020, 7:50 PM

ದುಬಾಯಿ( Reporter Karnataka News)
ಇಲ್ಲಿ ನಡೆದ 33ನೇ ಡ್ರೀಮ್ ಇಲೆವನ್ ಐಪಿಎಲ್ ಪಂದ್ಯದಲ್ಲಿ
ರಾಜಸ್ಥಾನ್ ರಾಯಲ್ಸ್ ವಿರುದದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.
ಆರ್.ಆರ್.ನಿಗದಿಪಡಿಸಿದ 178 ರನ್ ಮೊತ್ತವನ್ನು ಬೆನ್ನತ್ತಿದ ಆರ್.ಸಿ.ಬಿ. ಎಬಿಡಿ ವಿಲಿಯರ್ಸ್ ಅವರ 22 ಎಸೆತಗಳ 55 * ರನ್ನಿನ ಸ್ಪೋಟಕ ಇನ್ನಿಂಗ್ಸ್ನಿಂದಾಗಿ ಗೆಲುವು ದಾಖಲಿಸಿತು.

ಕ್ರಿಸ್ ಮೋರಿಸ್ ಅವರು 4 ವಿಕೆಟ್ಗಳು ಪಡೆದು ರಾಜಸ್ಥಾನ್ ಇನ್ನಿಂಗ್ಸ್ಗೆ ಕಡಿವಾಣ ಹಾಕಿದರು.
ಆರ್ಚರ್ ಎಸೆದ ಕೊನೆಯ ಓವರ್ನಲ್ಲಿ 10 ರನ್ಗಳನ್ನು ಗಳಿಸಿದ ಡಿವಿಲಿಯರ್ಸ್ 2 ಎಸೆತಗಳು ಬಾಕಿ ಇರುವಂತೆಯೆ ಪಂದ್ಯ ಮುಗಿಸಿದರು.