5:17 PM Saturday23 - January 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು

ಇತ್ತೀಚಿನ ಸುದ್ದಿ

ಇನ್ನಷ್ಟು ಅಮೃತಮತಿಯರು..! ಹಾಗಾದರೆ ಪ್ರೀತಿ ಮಾಯೆಯೇ? ವೈಚಾರಿಕ ವಸ್ತುವೇ? 

August 4, 2020, 3:08 AM

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka@gmail.com

ಪ್ರೀತಿ ಅಂದ್ರೆ ಏನು… ಬರೇ ಮಾಯೆಯೇ? ಮನಸ್ಸಿನ ವೈಚಾರಿಕ ವಸ್ತುವೇ/ಗೆಳೆತನ, ಅನುಕಂಪ, ಕರುಣೆಯೇ ? ಸುಖದ ಬಯಕೆಯೇ? ದೈಹಿಕ ಆಕರ್ಷಣೆಯೇ?

ಖ್ಯಾತ ಚಿಂತಕ ಜಿಡ್ಡು ಕೃಷ್ಣಮೂರ್ತಿ ಅದ್ಯಾವುದನ್ನೂ ಪ್ರೀತಿ ಎಂದು ಕರೆಯುವುದಿಲ್ಲ. ಪ್ರೀತಿ ಸಾವಿನಷ್ಟೇ ಮಹತ್ವದ ಅಂತಿಮ ಸ್ಥಿತಿ. ಆ ಸ್ಥಿತಿಯಲ್ಲಿ ಒಳ್ಳೆಯದು, ಕೆಟ್ಟದು, ಹೇಸಿಗೆ, ಸುಂದರ ಎನ್ನುವ ಎಲ್ಲ ದ್ವಂದ್ವ ಗಳು ಮಾಯವಾಗುತ್ತದೆ ಎಂದು ಹೇಳುತ್ತಾರೆ. ನಮ್ಮ ಸುತ್ತಮುತ್ತಲಿನ ಅನೇಕ ಘಟನೆಗಳು ಇದಕ್ಕೆ ಸಾಕ್ಷಿಯಾಗಿದೆ.

ರಾಜಕುಮಾರಿ ಡಯಾನಾ ಸತ್ತಾಗ ಇಂಗ್ಲೆಡ್ ನ ಬಕ್ಕಿಂಗ್ ಹ್ಯಾಮ್ ಅರಮನೆಯ ಎದುರುಗಡೆ ಟನ್ ಗಟ್ಟಲೆ ಹೂ ಸುರಿದು ಮೊಂಬತ್ತಿ ಬೆಳಗಿಸುವ ಸಾವಿರಾರು ಜನರು ಕಣ್ಣೀರು ಮಿಡಿದರು. ದೂರದ ಶ್ರೀಲಂಕಾದಂತಹ ಪುಟ್ಟ ದ್ವೀಪ ರಾಷ್ಟ್ರದಲ್ಲಿಯೂ ಡಯಾನಾಳ ಫೋಟೋ ಎದುರು ಹದಿಹರೆಯದವರುವ ಕಂಬನಿಗೆರೆದು ಪರಸ್ಪರ ಸಂತೈಸಿ ಕೊಂಡರು. ಕೆನಡಿಯ ಹತ್ಯೆಯ ಬಳಿಕ ಇಡೀ ಜಗತ್ತನ್ನು ಶೋಕ ಸಾಗರದಲ್ಲಿ ಮುಳುಗಿಸದಿದ್ದರೆ ಅದು ಡಯಾನಾಳ ‘ ಅಸಂಗತ’ ಸಾವು.

ರಾಜಕುಮಾರಿಯಾಗಿದ್ದು, ಮುಂದೆ ರಾಣಿಯಾಗಿ ಸಕಲ ಮರ್ಯಾದೆ ಪಡೆಯಬೇಕಾಗಿದ್ದ ಡಯಾನಾ ತನ್ನ ಗಂಡನನ್ನು ಬಿಟ್ಟು ಹೋಗುತ್ತಾಳೆ. ಪತಿಯ ತೊರೆಯುವುದು ದೊಡ್ಡ ವಿಷಯವಲ್ಲ, ಆದರೆ ಕರುಳಬಳ್ಳಿಯಾದ ಇಬ್ಬರು ಮಕ್ಕಳನ್ನು ಬಿಟ್ಟು ಹೋಗುತ್ತಾಳೆ. ಗಂಡನ ಬಿಟ್ಟು ಬೇರೆಯವರ ಜತೆ ಹೋದ ಬಳಿಕವೂ ಅವಳ ಜನಪ್ರಿಯತೆ ಕಡಿಮೆಯಾಗುವುದಿಲ್ಲ. ಹಾಗೆ ಗೆಳೆಯನ ಜತೆ ಸಾವನ್ನಪ್ಪುತ್ತಾಳೆ. ಆಕೆಯ ಆಕಸ್ಮಿಕ ಸಾವು ಒಂದು ರೀತಿಯಲ್ಲಿ ದೋದಿಯೊಡನೆ ಸಹಗಮನದಂತೆ. ಹಾಗಾಗಿ ಡಯಾನಾಳದ್ದು ಅರ್ಥವಿಲ್ಲದ ಸಾವು ಎಂದು ವ್ಯಾಖ್ಯಾನಿಸುವಂತಿಲ್ಲ.

ಖ್ಯಾತ ಸಾಹಿತಿ ಮಾಸ್ತಿಯವರ ಮನೆಗೆ ಊಟಕ್ಕೆ ಬಂದ ನವದಂಪತಿಯ ದಾಂಪತ್ಯ ಜೀವನ ಆರೇ ತಿಂಗಳಲ್ಲಿ ಮುರಿದು ಬೀಳುತ್ತದೆ. ಹೆಂಡತಿ ಬೇರೆ ಯಾರೋ ಜತೆ ಹೋದಳು. ಮಾಸ್ತಿಯವರು ಅದನ್ನು ತಾಯಿಯ ಗಮನಕ್ಕೆ ತಂದಾಗ, ‘ ಹೋಗ್ಲಿ ಕಣೋ, ಅವಳು ನಿಜವಾದ ಗಂಡನ ಜತೆ ಹೋದಳು’ ಎಂದರಂತೆ. ಡಯಾನಾ ಗಂಡನ ಬಿಟ್ಟು ಹೋದಾಗ ಇಂಗ್ಲೆಂಡ್ ಸೇರಿದಂತೆ ಜಗತ್ತಿನಾದ್ಯಂತದ ಜನರು ಆಕೆಯನ್ನು ಸ್ವೀಕರಿಸಿದ ರೀತಿಗೂ ಮಾಸ್ತಿಯವರ ತಾಯಿಯ ಮನಸ್ಥಿತಿಗೂ ಸಾಕಷ್ಟು ಸಾಮ್ಯತೆಯನ್ನು ಕಾಣಬಹುದು. ಇದನ್ನೇ ವೈಚಾರಿಕ ಕ್ರಾಂತಿ ಎಂದು ಹೇಳಬಹುದು.

ಗಂಡನ ತೊರೆದು ಪರಪುರುಷನ ಜತೆ ಹೋದ ಘಟನೆಗಳು ಅನಾದಿ ಕಾಲದಿಂದಲೂ ನಮ್ಮಲ್ಲಿ ಸಾಕಷ್ಟು ಇದೆ. ರಾಜಕಾರಣಿಯೊಬ್ಬರ ಹೆಂಡತಿ ಗಂಡನ ತೊರೆದು ಹೋಗುವುದು. ಜನ್ನನ ‘ಯಶೋಧರ ಚರಿತೆ’ ಯಲ್ಲಿ ಬರುವ ಅಮೃತಮತಿ ಪಾತ್ರ ಕೂಡ ಪರಪುರುಷನ ಜತೆ ಅನುರಕ್ತಳಾದ ಹೆಣ್ಣಿನ ಕಥೆ. ತನಗೆ ಗಂಡನಿದ್ದರೂ ಪರಪುರುಷನಿಗೆ ಒಲಿಯುವ ಹೆಣ್ಣಿಗೆ ತನ್ನ ಗಂಡನಲ್ಲಿ ಇಲ್ಲದ ಮತ್ಯಾವುದೇ ಗುಣ ಸೆಳೆತಕ್ಕೆ ಕಾರಣವಾಗಬಹುದು. ಇದು ಸಮರ್ಥನೀಯ ಕೂಡ ಹೌದು.

ಅಮೃತಮತಿ ಪ್ರಕರಣದಲ್ಲಿ ಕೂಡ ಇದನ್ನೇ ಕಾಣಬಹುದು. ನೋಡಲು ವಿಕಾರನಾಗಿರುವ ಒಬ್ಬ ಪುರುಷನ ಕಂಠಸಿರಿಗೆ ಒಲಿದು ಆತನ ದಾಸಳಾಗುತ್ತಾಳೆ. ಬರೇ ಆತನ ಸ್ವರ ಮಾಧುರ್ಯಕ್ಕೆ ಮನಸೋತು ಆತನೊಡನೆ ದೇಹವನ್ನು ಹಂಚಿಕೊಳ್ಳುತ್ತಾಳೆ. ಇದನ್ನು ಪ್ರೀತಿಯ ವಿಕೃತ ಸ್ಥಿತಿ ಎಂದು ಮನೋತಜ್ಞರು ಹೇಳುತ್ತಾರೆ. ಹಾಗಾದರೆ ಪ್ರೀತಿ ಚಂಚಲೆಯೇ?  ಪ್ರೀತಿ ಮಾಯೆಯೇ?

ಇತ್ತೀಚಿನ ಸುದ್ದಿ

ಜಾಹೀರಾತು