7:26 AM Monday30 - November 2020
ಬ್ರೇಕಿಂಗ್ ನ್ಯೂಸ್
ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಕೊಂಚಾಡಿ ಕಾಶೀ ಮಠದಲ್ಲಿ ತುಳಸಿ ಪೂಜೆ: ಪಂಚಾಮೃತ, ಕ್ಷೀರಾಭಿಷೇಕ ಸಂಪನ್ನ ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಹೈದರಾಬಾದ್ ತಲುಪಿದ ಪ್ರಧಾನಿ ಮೋದಿ: ಬಯೋಟೆಕೆ ಸಂಸ್ಥೆಗೆ ಭೇಟಿ, ವಿಜ್ಞಾನಿಗಳ ಜತೆ ಸಮಾಲೋಚನೆ 

ಇತ್ತೀಚಿನ ಸುದ್ದಿ

ಇದೀಗ ಚಿನ್ನದ ಮೇಲೆ ಆದಾಯ ಇಲಾಖೆ ಕಣ್ಣು: ಅಕ್ರಮ ಬಂಗಾರ ಸಂಗ್ರಹಕ್ಕಿಲ್ಲ ಅವಕಾಶ

July 31, 2020, 4:54 AM

ನವದೆಹಲಿ(reporterkarnataka news): ಹಳದಿ ಲೋಹ ಚಿನ್ನದ ಮೇಲೆ ಭಾವನಾತ್ಮಕ ಸಂಬಂಧ ಹೊಂದಿರುವ ಭಾರತೀಯರಿಗೆ ಶೀಘ್ರದಲ್ಲೇ ದೊಡ್ಡ ಆಘಾತ ಉಂಟಾಗಲಿದೆ.  ಚಿನ್ನ ಸಂಗ್ರಹದ ಮೇಲೆಯೂ ಆದಾಯ ತೆರಿಗೆ ಹಾಗೂ ಅನುಷ್ಠಾನ ನಿರ್ದೇಶನಾಲಯ ನಿಗಾ ಇಡಲಿದೆ.

ದೇಶದಲ್ಲಿರುವ ಚಿನ್ನದ ಪ್ರಮಾಣವನ್ನು ಸದ್ಬಳಕೆ ಮಾಡಿಕೊಂಡು ಆಮದು ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯ ಹೊಸ ಯೋಜನೆ ರೂಪಿಸಿದೆ. ಇದರ ಅನ್ವಯ ಇನ್ನು ಮುಂದೆ ಜನತೆ ತಮ್ಮಲ್ಲಿರುವ ಚಿನ್ನದ ಪ್ರಮಾಣದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕು. ಸರಕಾರ ವೈಯಕ್ತಿಕ ಚಿನ್ನ ಬಳಕೆಗೆ ನಿರ್ದಿಷ್ಟ ಪ್ರಮಾಣವನ್ನು ನಿಗದಿಪಡಿಸಲಿದೆ. ಒಬ್ಬರಿಗೆ ಗರಿಷ್ಠ ಒಂದು ಕೆಜಿ ಚಿನ್ನ ಹೊಂದುವ ಹಕ್ಕನ್ನು ನೀಡುವ ಸಾಧ್ಯತೆಗಳಿವೆ. ಅದಕ್ಕಿಂತ ಹೆಚ್ಚಿನ ಚಿನ್ನಕ್ಕೆ ಸರಕಾರ ತೆರಿಗೆ ವಿಧಿಸಲಿದೆ. ಅಕ್ರಮ ಚಿನ್ನವನ್ನು ತೆರಿಗೆ ಹಾಗೂ ದಂಡ ಕಟ್ಟಿ ಸಕ್ರಮಗೊಳಿಸಲು ಕೂಡ ಅವಕಾಶವಿದೆ ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ರಿಪೋರ್ಟರ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.

ಹೊಸ ಕಾನೂನಿನ ಪ್ರಕಾರ ಪ್ರತಿಯೊಬ್ಬರು ಆದಾಯ ತೆರಿಗೆ ಇಲಾಖೆಗೆ ತಮ್ಮಲ್ಲಿರುವ ಚಿನ್ನದ ಬಗ್ಗೆ ಮಾಹಿತಿ ನೀಡಬೇಕು. ಇದರಿಂದ ಇನ್ನು ಮುಂದೆ ಲಾಕರ್ ಗಳಲ್ಲಿ, ಮನೆ ಬೀರುಗಳಲ್ಲಿ ಕೆಜಿಗಟ್ಟಲೆ ಚಿನ್ಬ ಸಂಗ್ರಹಿಸಿಡುವುದು ಕಷ್ಟ ಸಾಧ್ಯವಾಗಲಿದೆ.

ದೇಶದಲ್ಲಿ ಇತ್ತೀಚೆಗೆ ಕಪ್ಪು ಹಣವನ್ನು ಚಿನ್ನವಾಗಿ ಪರಿವರ್ತಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಇದನ್ನು ಅರಿತ ಹಣಕಾಸು ಸಚಿವಾಲಯದ ಚಿನ್ನವನ್ನು ದೇಶದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿದೆ. ಕಪ್ಪು ಹಣದಿಂದ ಚಿನ್ನ ಖರೀದಿಸಿ ಸಂಪತ್ತು ವೃದ್ಧಿಸುವ ಕ್ರಮಕ್ಕೆ ಇದರಿಂದ ಬ್ರೇಕ್ ಬೀಳಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು