ಇತ್ತೀಚಿನ ಸುದ್ದಿ
ಆ.5ರಿಂದ ಜಿಮ್ ಲಾಕ್ ಓಪನ್, ನೈಟ್ ಕರ್ಫ್ಯೂ ಇಲ್ಲ : ಮತ್ತೇನಿದೆ ಅನ್ಲಾಕ್ 3.0 ಮಾರ್ಗದರ್ಶಿಯಲ್ಲಿ ?
July 29, 2020, 2:35 PM

ನವದೆಹಲಿ(reporterkarnataka news):
ಕೊರೊನಾ ಸೋಂಕು ತಡೆಗೆ ಜಾರಿ ಮಾಡಲಾಗಿದ್ದ ಲಾಕ್ ಡೌನ್ ಹಂತಹಂತವಾಗಿ ಸಡಿಲಗೊಳಿಸಿ ಅನ್ಲಾಕ್ ಮಾಡುವ ಕೇಂದ್ರ ಸರಕಾರದಪ್ರಕ್ರಿಯೆ ಆರಂಭಗೊಂಡಿದ್ದು, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅನ್ಲಾಕ್ ಪ್ರಕ್ರಿಯೆ 3.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.
ರಾತ್ರಿ ಕರ್ಫ್ಯೂ ತೆರವುಗೊಳಿಸಲಾಗಿದ್ದು, ಆಗಸ್ಟ್ 5 ರಿಂದ ಜಿಮ್ ಓಪನ್ ಮಾಡಬಹುದಾಗಿದೆ. ವಿಮಾನ ಸಂಚಾರಕ್ಕೆ ಅವಕಾಶ ನೀಡಲು ಸರಕಾರ ಕ್ರಮ ಕೈಗೊಂಡಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಮಾರ್ಗಸೂಚಿ ನೀಡಲಾಗಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಅನ್ಲಾಕ್ 3.0 ಕುರಿತಾಗಿ ಚರ್ಚೆ ನಡೆಸಿದ್ದು ಇದಾದ ನಂತರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಮುಂದೆ ರಾತ್ರಿ ಕರ್ಫ್ಯೂ ಇರುವುದಿಲ್ಲ ಎಂದು ಹೇಳಲಾಗಿದೆ.