4:33 AM Friday22 - January 2021
ಬ್ರೇಕಿಂಗ್ ನ್ಯೂಸ್
ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು ಮಂಗಳೂರಿನಲ್ಲಿ  ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ 5ನೇ ಪುಣ್ಯತಿಥಿ ಆಚರಣೆ ಮಡಿಕೇರಿ ತಾಲೂಕು ಅಕ್ರಮ- ಸಕ್ರಮ ಸಮಿತಿ ಸಭೆಯಲ್ಲಿ ಹಲವು ಅರ್ಜಿಗಳ ವಿಲೇವಾರಿ  … ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಸಿಕ್ಕಿತು ಜಾಮೀನು: 140 ದಿನಗಳ ಬಳಿಕ ಬಿಡುಗಡೆ…

ಇತ್ತೀಚಿನ ಸುದ್ದಿ

ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆ: ಒಂದು ರೂಪಾಯಿ ನಾಣ್ಯ ನುಂಗಿದ  ಮಗು ಬಲಿ

August 2, 2020, 10:05 AM

ಕೊಚ್ಚಿ(reporterkarnatakanews): ಕೊರೋನಾದ ಕಾರಣ ನೀಡಿ ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ ಮೂರು ವರ್ಷ ಪ್ರಾಯದ ಮಗು ಪ್ರಾಣ ಕಳೆದುಕೊಂಡಿದೆ. ಕೇರಳದಲ್ಲಿ ಈ ಘಟನೆ ಸಂಭವಿಸಿದೆ.  

ಕಂಟೇನ್ ಮೆಂಟ್ ವಲಯದಲ್ಲಿದ್ದ ಮಗು ಒಂದು ರೂಪಾಯಿ ನಾಣ್ಯ ನುಂಗಿತ್ತು. ಆಲುವಾ ಸಮೀಪದ   ಕ಼ಡಂಗಲ್ಲೂರು  ನಿವಾಸಿ ನಂದಿನಿ ಮತ್ತು ರಾಜು ದಂಪತಿಯ ಮೂರು ವರ್ಷದ ಪ್ರಥ್ವಿರಾಜ್ ನಾಣ್ಯ ನುಂಗಿ ಪ್ರಾಣ ಕಳೆದುಕೊಂಡ ನತದೃಷ್ಟ ಮಗು.

ಮಗುವಿನ ಪ್ರಾಣ ರಕ್ಷಿಸಲು ಹಲವು ಆಸ್ಪತ್ರೆಗಳಿಗೆ ತೆರಳಿದರೂ ಚಿಕಿತ್ಸೆ  ನಿರಾಕರಿಸಲಾಯಿತು.  ಯಾವುದೇ ಆಸ್ಪತ್ರೆ ಮುಂದೆ ಬರಲಿಲ್ಲ. ತಮ್ಮ ಕುಟುಂಬ ಕಂಟೇನ್ ಮೆಂಟ್ ವಲಯದಲ್ಲಿದೆ.  ಈ  ಕಾರಣ ನೀಡಿ ಚಿಕಿತ್ಸೆ ನಿರಾಕರಿಸಲಾಯಿತು ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.

ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಮಗು ಪ್ರಾಣ ಕಳೆದುಕೊಂಡಿದೆ. ಈ ಸಂಬಂಧ ಕೇರಳ ಸರ್ಕಾರ ಉನ್ನತ ತನಿಖೆಗೆ ಆದೇಶ  ನೀಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು