8:58 PM Thursday21 - January 2021
ಬ್ರೇಕಿಂಗ್ ನ್ಯೂಸ್
ಮಡಿಕೇರಿ ತಾಲೂಕು ಅಕ್ರಮ- ಸಕ್ರಮ ಸಮಿತಿ ಸಭೆಯಲ್ಲಿ ಹಲವು ಅರ್ಜಿಗಳ ವಿಲೇವಾರಿ  … ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಸಿಕ್ಕಿತು ಜಾಮೀನು: 140 ದಿನಗಳ ಬಳಿಕ ಬಿಡುಗಡೆ… ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡನ್ ಪ್ರಮಾಣ ವಚನ ಸ್ವೀಕಾರ: ಕಣ್ಣೀರು ಸುರಿಸಿದ… ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ 29ರಂದು ಮಂಗಳೂರಿಗೆ ಮಂಗಳೂರು ನಗರದ ಹಲವೆಡೆ ನಾಳೆ, ನಾಳಿದ್ದು ನೀರಿಲ್ಲ: ಯಾವೆಲ್ಲ ಪ್ರದೇಶವೆಂದು ನೀವೇ ಓದಿ ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್…

ಇತ್ತೀಚಿನ ಸುದ್ದಿ

ಅರೆಕೆರೆ ಬೈಲು ವೆಟ್ ವೆಲ್ ಸಮಸ್ಯೆ: ಪಾಲಿಕೆ ನಿರ್ಲಕ್ಷ್ಯ, ಕಲುಷಿತಗೊಳ್ಳುತ್ತಿದೆ  ನೇತ್ರಾವತಿ

August 6, 2020, 1:36 AM

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಐತಿಹಾಸಿಕ ಗುಜ್ಜರಕೆರೆ ಬಳಿಯಿರುವ ಮಂಗಳಾದೇವಿ ಮುಳಿಹಿತ್ಲು ಸಮೀಪದ ಅರೆಕೆರೆ ಬೈಲು ವೆಟ್ ವೆಲ್ ಸಂಖ್ಯೆ 6 ರಲ್ಲಿ ವಿದ್ಯುತ್ ಇಲ್ಲದಿದ್ದರೆ ದೇವರೇ ಗತಿ. ಕರೆಂಟ್ ಕೈ ಕೊಟ್ಟರೆ ಕೊಳಚೆ ನೀರನ್ನು ಶುದ್ದೀಕರಿಸಲು ಸಾಧ್ಯವಾಗದೆ ನೇರವಾಗಿ ಚರಂಡಿಗೆ ಬಿಡಲಾಗುತ್ತಿದೆ.

ಅರೆಕೆರೆ ಬೈಲ್ ವೆಟ್ ವೆಲ್ ನಲ್ಲಿ ವಿದ್ಯುತ್ ಕೈಕೊಟ್ಟ ಸಂದರ್ಭದಲ್ಲಿ ಕೊಳಚೆ ನೀರನ್ನು ಶುದ್ಧೀಕರಣ ಮಾಡಲು 4 ವರ್ಷಗಳ ಹಿಂದೆ ಜನರೇಟರ್  ಅಳವಡಿಸಲಾಗಿದೆ. ಆದರೆ ಜನರೇಟರ್ ಹಾಕಿದ ಬಳಿಕ ಅದು ಕೆಲಸ ಮಾಡಿದ್ದು ಒಂದು ದಿನ ಮಾತ್ರ. ಇದರಿಂದ ಕರೆಂಟ್ ಹೋದಾಗಲೆಲ್ಲ ವೆಟ್ ವೆಲ್ ಗೆ  ಬಂದ ನೀರನ್ನು ಶುದ್ಧೀಕರಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ವೆಟ್ ವೆಲ್ ಫುಲ್ ಆದ ಕೂಡಲೇ ಕೊಳಚೆ ನೀರನ್ನು ಚರಂಡಿಗೆ ಬಿಡಲಾಗುತ್ತಿದೆ. ಚರಂಡಿಗೆ ಬಂದ ನೀರು ನೇತ್ರಾವತಿ ನದಿಗೆ ಸೇರುತ್ತದೆ. ದಿನವಿಡೀ ವಿದ್ಯುತ್ ಕೊಟ್ಟರೆ ಇಡೀ ದಿನ ಕೊಳಚೆ ನೀರು ಚರಂಡಿ ಮೂಲಕ ನದಿಗೆ ಸೇರುತ್ತದೆ.

ಲಕ್ಷಾಂತರ ರೂ. ವೆಚ್ಚ ಮಾಡಿ ಇಲ್ಲಿ  ಜನರೇಟರ್ ಆಳವಡಿಸಲಾಗಿತ್ತು. ವಿದ್ಯುತ್ ಕೈ ಕೊಟ್ಟ ಸಂದರ್ಭ ಒಮ್ಮೆ ಜನರೇಟರ್ ಚಾಲೂ ಮಾಡಲಾಗಿತ್ತು . ಆದರೆ ಚಾಲೂ ಆಗುತ್ತಿದ್ದ ಜನರೇಟರನ್ನು ವಿದ್ಯುತ್ ಬಂದ ಬಳಿಕ ತಾಂತ್ರಿಕ ಕಾರಣದಿಂದ ಬಂದ್ ಮಾಡಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ  ಈ ತಾಂತ್ರಿಕ ಸಮಸ್ಯೆ ಗೊತ್ತಿದ್ದರೂ ಕಂಪೆನಿಯ ತಾಂತ್ರಿಕ ಪರಿಣಿತರನ್ನು ಕರೆಸಿ ಜನರೇಟರ್ ದುರಸ್ತಿ ಮಾಡುವ ಗೋಜಿಗೆ ಪಾಲಿಕೆ ಇಲ್ಲಿಯವರೆಗೆ ಕೈ ಹಾಕಿಲ್ಲ. ನಾಲ್ಕು ವರ್ಷದ ಹಿಂದೆ  ಮೂಲೆ ಸೇರಿದ ಜನರೇಟರ್  ಯಥಾ ಸ್ಥಿತಿಗೆ ಇಂದಿನವರೆಗೂ ಬಂದಿಲ್ಲ. 

ಈ ಬಗ್ಗೆ ಮೇಯರ್ , ಸ್ಥಳೀಯ ಕಾರ್ಪೊರೇಟರ್ , ಕಮಿಷನರ್ ಅವರ ಗಮನಕ್ಕೆ ತಂದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ಆಡಳಿತದ ನಿರ್ಲಕ್ಹ್ಯದಿಂದ ಪರಿಸರ ಗಬ್ಬು ವಾಸನೆ ಹೊಡೆಯುತ್ತಿದೆ ಮಾತ್ರವಲ್ಲದೆ, ನದಿ ನೀರು ಕೂಡ ಕಲುಷಿತಗೊಳ್ಳುತ್ತಿದೆ. ಮ್ಯಾನ್ ಹೋಲ್ ಗಳು ತುಂಬಿ ತುಳುಕುತ್ತಿದೆ.ಪಾಲಿಕೆ ಇನ್ನಾದರೂ ಎಚ್ಚೆತ್ತುಕೊಳ್ಳುವ ಅಗತ್ಯವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು