ಇತ್ತೀಚಿನ ಸುದ್ದಿ
ಅಯೋಧ್ಯೆ ರಾಮ ಮಂದಿರ ಶಿಲಾನ್ಯಾಸ ಸಮಾರಂಭಕ್ಕೆ ಹೊರಟ ಪ್ರಧಾನಿ ಮೋದಿ
August 5, 2020, 4:47 AM

ನವದೆಹಲಿ(reporterkarnatakanews): ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಭೂಮಿ ಪೂಜೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ತೆರಳಿದ್ದಾರೆ.
ವಾಯು ಪಡೆ ವಿಮಾನದಲ್ಲಿ ಮೋದಿ ಪ್ರಯಾಣ ಬೆಳೆಸಿದ್ದಾರೆ. ಕಾರ್ಯಕ್ರಮದಲ್ಲಿ ಮೋದಿ ಸಾಂಪ್ರದಾಯಿಕ ಉಡುಪು ಧರಿಸಲಿದ್ದಾರೆ.
ಮೋದಿ ಭೇಟಿ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಅಭೂತಪೂರ್ವ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಕೇವಲ ಐದು ಗಣ್ಯರಿಗೆ ಮಾತ್ರ ವೇದಿಕೆ ಮೇಲೆ ಅವಕಾಶ ನೀಡಲಾಗಿದೆ
ಮಧ್ಯಾಹ್ನ 12. 30ಕ್ಕೆ ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಯಲಿದೆ.