11:04 PM Tuesday1 - December 2020
ಬ್ರೇಕಿಂಗ್ ನ್ಯೂಸ್
ಕುಂಚ ಕಲಾವಿದರು ವೃತ್ತಿ ಕೌಶಲ್ಯ ಹೆಚ್ಚಿಸಿ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು ರಾಜ್ಯದ 6004 ಗ್ರಾಮ ಪಂಚಾಯಿತಿ ಪೈಕಿ 5762 ಗ್ರಾಪಂಗಳಲ್ಲಿ ನಡೆಯಲಿದೆ ಲೋಕಲ್ ಫೈಟ್  ರಾಜಕೀಯ ಪಕ್ಷ ಸ್ಥಾಪನೆ: ಇಂದು ಸೂಪರ್ ಸ್ಟಾರ್ ರಜನಿಕಾಂತ್ ಸಭೆ ದಿಲ್ಲಿಯಲ್ಲಿ ರೈತರ ಪ್ರತಿಭಟನೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಇತ್ತೀಚಿನ ಸುದ್ದಿ

ಅಯೋಧ್ಯೆಯಲ್ಲಿ ಭಕ್ತರಿಗೆ ಹಂಚಲು 1,10,000 ಲಡ್ಡು ತಯಾರಿ !

July 31, 2020, 5:14 PM

ನವದೆಹಲಿ(ReporterKarnataka News)

ರಾಮ ಜನ್ಮಭೂಮಿ ಎಂದು ಕರೆಯಲಾಗುವ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಅಂಗವಾಗಿ ಆ.5ರಂದು ಭೂಮಿ ಪೂಜೆ ನಡೆಯಲಿದ್ದು ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ.

ಭೂಮಿ ಪೂಜೆಯ ಅಂಗವಾಗಿ ಈಗಾಗಲೇ ಪೂರ್ವಸಿದ್ಧತಾ ಕಾರ್ಯಗಳು ಪ್ರಗತಿಯಲ್ಲಿದ್ದು, ಭಕ್ತಾದಿಗಳಿಗೆ ಸಿಹಿ ಹಂಚಲು ಬರೋಬ್ಬರಿ 1ಲಕ್ಷದ 10 ಸಾವಿರ ಲಡ್ಡುಗಳನ್ನು ತಯಾರಿಸಲಾಗುತ್ತಿದೆ.

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಬೃಹತ್ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಒಂದೆಡೆ ಸಿದ್ದತೆ ನಡೆಯುತ್ತಿದ್ದು, ಮತ್ತೊಂದೆಡೆ ಭಕ್ತಾದಿಗಳಿಗೆ ಸಿಹಿ ಹಂಚಲು 1,10,000 ಲಡ್ಡುಗಳನ್ನ ತಯಾರಿಸಲಾಗುತ್ತಿದೆ. ಈ ಕಾರ್ಯವು ಮಣಿ ರಾಮ್ ದಾಸ್ ಛಾವ್ನಿಯಲ್ಲಿ ನಡೆಯುತ್ತಿದೆ.

ಭೂಮಿ ಪೂಜೆ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಪುರೋಹಿತರು ಕರ್ತವ್ಯ ನಿರತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ 50 ಮಂದಿ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು