9:27 PM Monday25 - January 2021
ಬ್ರೇಕಿಂಗ್ ನ್ಯೂಸ್
ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!… ವಿವಾದಾತ್ಮಕ ವಾಟ್ಸಾಪ್ ಚಾಟ್ : ಮಹಾರಾಷ್ಟ್ರ ಸರಕಾರದಿಂದ ಅರ್ನಾಬ್ ಮತ್ತೆ ಬಂಧನ ಸಾಧ್ಯತೆ

ಇತ್ತೀಚಿನ ಸುದ್ದಿ

ಅಮೃತ ಹಸ್ತ ಚಾಚುತ್ತಿರುವ ಈ ಸಂಜೀವಿನಿ:ಐದು ವರ್ಷದಲ್ಲಿ ೩೦೮ ಕುಟುಂಬಗಳಿಗೆ ೬೨ಲಕ್ಷ ನೆರವು.!

August 2, 2020, 5:19 AM

ಗಣೇಶ್ ಆಚಾರ್ಯ ಅದ್ಯಪಾಡಿ
info.reporterkarnataka@gmail.com


ಸಾಮಾನ್ಯವಾಗಿ ಯುವಕರು ಕ್ರೀಡಾ ಸಂಸ್ಥೆಗಳನ್ನು ಅಥವಾ ಸ್ನೇಹಕೂಟವನ್ನು ಕಟ್ಟಿಕೊಂಡು ಮೋಜು ಮಸ್ತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ ಆದರೆ ಈ ಒಂದು ಯುವಕರ ಸಂಘಟನೆಯೂ ನಿರಂತರವಾಗಿ ಅಂದರೆ ಸುಮಾರು ಐದು ವರ್ಷದಿಂದ ಸಾಮಾಜಿಕ ಸೇವ ಕೈಂಕರ್ಯದಲ್ಲಿ ತನದೇ ಆದ ಮೈಲಿಗಲ್ಲನ್ನು ಸ್ಥಾಪಿಸಿದೆ.
ಹೌದು, ತುಳುನಾಡಿನಲ್ಲಿ ಈಗ ಮನೆ ಮಾತಾಗಿರುವ ಅಮೃತ ಸಂಜೀವಿನಿ ಎನ್ನುವಂತಹ ಯುವಕರ ಸಾಮಾಜಿಕ ಸೇವಾ ಸಂಘಟನೆಯೂ ವಿವಿಧ ರೀತಿಯಲ್ಲಿ ತನ್ನನ್ನು ತಾನು ಸಾಮಾಜಿಕ ಸೇವೆಯಲ್ಲಿ ವಿವಿಧ ಮಜಲು ತೊಡಗಿಸಿಕೊಂಡು ೫ ವರ್ಷದಲ್ಲಿ ಅರ್ಧ ಕೋಟಿಗಿಂತಲೂ ಹೆಚ್ಚಿನ ನೆರವನ್ನು ಅವಶ್ಯಕತೆ ಇರುವವರಿಗೆ ನೀಡಲಾಗಿದೆ.
ಯಾರಿಗಾದರು ಆರ್ಥಿಕ ಸಹಾಯದ ಅವಶ್ಯಕತೆ ಇದೆ ಎಂದು ಗೊತ್ತಾದಾಗ ಅಮೃತ ಸಂಜೀವಿನಿ ಗ್ರೂಪಲ್ಲಿ ಅವರ ಪರಿಸ್ಥಿತಿಯ ಬಗ್ಗೆ ಸಣ್ಣ ಬರಹವನ್ನು ಹಂಚಲಾಗುತ್ತದೆ ಬಳಿಕ ಸದಸ್ಯರು ತಮ್ಮ ಅನುಕೂಲನುಸಾರ ದೇಣಿಗೆಯನ್ನು ನೀಡುತ್ತಾರೆ ಬಳಿಕ ಅದನ್ನು ನಿಗದಿತ ದಿನದಂದು ಅವಶ್ಯಕತೆ ಇರುವವರಿಗೆ ಅದನ್ನು ನೀಡಲಾಗುತ್ತದೆ. ಈ ರೀತಿಯಾಗಿ ಸತತವಾಗಿ ಕರ್ತವ್ಯನ್ನು ನಿರ್ವಗಹಿಸಲಾಗುತ್ತಿದೆ.

೬೨ಲಕ್ಷ ರೂ. ನೆರವು
ಆರ್ಥಿಕ ನೆರವು ಅಗತ್ಯವಿರುವ ಕುಟುಂಬಗಳಿಗೆ ಹಾಗೂ ಅಶಕ್ತರಿಗೆ ಆರ್ಥಿಕವಾಗಿ ಸಹಾಯವನ್ನು ಮಾಡುತ್ತಾ ಬಂದಿರುವ ಅಮೃತ ಸಂಜೀವಿನಿಯು ಯಾವುದೇ ದೊಡ್ಡ ದಾನಿಗಳನ್ನು ಹೊಂದಿರದೆ ಸಮನಸ್ಕ ಯುವಕರು ತಮ್ಮ ಆದಾಯದ ಕಿಂಚಿತ್ ಹಣವನ್ನು ಈ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನರ ಕಣ್ಣೀರು ಒರೆಸುವ ಕೆಲಸವನ್ನು ಮಾಡುತ್ತಿದ್ದಾರೆ ಇಲ್ಲಿಯವರೆಗೆ ಸುಮಾರು ೬೨ಲಕ್ಷ ರೂ. ನೆರವನ್ನು ಅಮೃತ ಸಂಜೀವಿನಿ ಸಂಸ್ಥೆಯು ನೀಡಿದೆ.
ಇಲ್ಲಿಯವರೆಗೆ ೫೬ ಮಾಸಿಕ ಯೋಜನೆ, ೧೪೭ ತುರ್ತು ಯೋಜನೆಗಳೊಂದಿಗೆ ಸುಮಾರು ೩೦೮ ಬಡಕುಟುಂಬಗಳಿಗೆ ಈ ೬೨ಲಕ್ಷ ರೂ ದೇಣಿಗೆಯನ್ನು ನೀಡಲಾಗಿದೆ ಎನ್ನುತ್ತಾರೆ ತಂಡದ ಸದಸ್ಯರು. ಹಾಗೂ ಇವರು ಎಲ್ಲಿಯೂ ತಮ್ಮ ಹೆಸರನ್ನು ಬಹಿರಂಗಪಡಿಸುವುದಿಲ್ಲ

ಸಾವಿರಕ್ಕೂ ಅಕ ಸದಸ್ಯರು
೨೦೧೫ರ ಆಗಸ್ಟ್ ೨ ರಂದು ಆರಂಭವಾದ ಅಮೃತ ಸಂಜೀವಿನಿಯೂ ಇಂದಿಗೆ ಐದು ವರ್ಷವನ್ನು ಪೂರ್ಣಗೊಳಿಸಿದ್ದು, ಕೊರೊನಾ ಸಂದರ್ಭದಲ್ಲೂ ತನ್ನ ಕರ್ತವ್ಯವನ್ನು ನಿರ್ವಹಿಸಿತ್ತು. ಆರಂಭದಲ್ಲಿ ಕೇವಲ ೧೭ಮಂದಿ ಯುವಕರು ಕಟ್ಟಿಕೊಂಡ ತಂಡದಲ್ಲಿ ಇಂದಿಗೆ ಸಾವಿರಕ್ಕೂ ಅಕ ಸದಸ್ಯರಿದ್ದಾರೆ ಹಾಗೂ ಇದರ ಛಾಯೆಯಲ್ಲಿ ಸುಮಾರು ೨೯ ತಂಡಗಳು ಕೂಡ ನೆರವು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ.

ಕೋಟ್-
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಅಥವಾ ತುಂಬಾ ಶೋಚನೀಯ ಸ್ಥಿತಿಯಲ್ಲಿದ್ದು ಆರ್ಥಿಕ ನೆರವು ಬಯಸುವವರಿಗೆ ಸಹಾಯ ಹಸ್ತವನ್ನು ನಮ್ಮಿಂದಾದ ಮಟ್ಟಲ್ಲಿ ನೀಡುತ್ತಾ ಬಂದಿದ್ದೇವೆ. ಕಳೆದ ಬಾರಿ ಮಾಸಿಕ ಯೋಜನೆಹಳ ಸುವರ್ಣ ಮಹೋತ್ಸವವನ್ನು ಆಚರಿಸಲಾಗಿತ್ತು. ಆಗಸ್ಟ್ ೨ಕ್ಕೆ ಸಂಸ್ಥೆ ಐದಯ ವರ್ಷವನ್ನು ಪೂರೈಸುತ್ತಿದ್ದು ನಮ್ಮ ಕಾರ್ಯಕ್ಕೆ ಮತ್ತಷ್ಟು ಬಲ ಸಿಗಲಿದೆ.
ವಸಂತ್ ಪಣಪಿಲ,
ಸದಸ್ಯರು, ಅಮೃತ ಸಂಜೀವಿನಿ

ಇತ್ತೀಚಿನ ಸುದ್ದಿ

ಜಾಹೀರಾತು